DJI ಕಂಪನಿಯಿಂದ ಹೊಸ Osmo 360 ಕ್ಯಾಮೆರಾ ಇದೀಗ ಬಿಡುಗಡೆ ಆಗಿದ್ದು, ಇದು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ 360 ಡಿಗ್ರಿ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾದಲ್ಲಿ 1 ಇಂಚಿನ HDR ಸೆನ್ಸರ್ ಬಳಸಲಾಗಿದ್ದು, ಇದು ಅತ್ಯುತ್ತಮ ಗುಣಮಟ್ಟದ ಚಿತ್ರ ಹಾಗೂ ವಿಡಿಯೋಗಳನ್ನು ಕ್ಯಾಪ್ಚರ್ ಮಾಡಲು ಸಹಾಯ ಮಾಡುತ್ತದೆ. Osmo 360 ನ ಪ್ರಮುಖ ಆಕರ್ಷಣೆಯೆಂದರೆ ಇದು 8K ರೆಸಲ್ಯೂಷನ್ನಲ್ಲಿ 30fps (ಫ್ರೇಮ್ಪರ್ಸೆಕೆಂಡ್) ನಲ್ಲಿ ನೇಟಿವ್ 360 ಡಿಗ್ರಿ ವಿಡಿಯೋ ಶೂಟ್ ಮಾಡುತ್ತದೆ. ಈ ಫೀಚರ್ನಿಂದ ಬಳಕೆದಾರರು ಹೆಚ್ಚು ವಿವರಗಳೊಂದಿಗೆ ಸುಂದರ ದೃಶ್ಯಗಳನ್ನು ಶೂಟ್ ಮಾಡಬಹುದು.
ಇದರಲ್ಲಿರುವ RockSteady 3.0 ಮತ್ತು HorizonSteady ತಂತ್ರಜ್ಞಾನಗಳಿಂದ ನೀವು ಶೂಟ್ ಮಾಡುವ ವಿಡಿಯೋಗಳು ತುಂಬಾ ಸ್ಥಿರವಾಗಿರುತ್ತವೆ. Osmo 360 ಕ್ಯಾಮೆರಾದ ಮತ್ತೊಂದು ವಿಶೇಷತೆ ಎಂದರೆ Invisible Selfie Stick. ಈ ತಂತ್ರಜ್ಞಾನದಿಂದ ಶೂಟ್ ಮಾಡಿದಾಗ ಸೆಲ್ಫಿ ಸ್ಟಿಕ್ ವಿಡಿಯೋ ಅಥವಾ ಫೋಟೋದಲ್ಲಿ ಕಾಣಿಸದಂತೆ ಮಾಡಬಹುದು. ಜೊತೆಗೆ Gesture ಮತ್ತು Voice Control ಸಹ ಇರುವುದರಿಂದ, ಕೈ ಚಲನೆ ಅಥವಾ ಧ್ವನಿಯಿಂದ ಕ್ಯಾಮೆರಾವನ್ನು ನಿಯಂತ್ರಿಸಬಹುದು. ಇದು ವ್ಲಾಗರ್ಗಳು ಮತ್ತು ಟ್ರಾವೆಲ್ ಶೂಟಿಂಗ್ ಮಾಡುವವರಿಗೆ ಬಹುಪಯೋಗಿ ಆಯ್ಕೆ.
Osmo 360 ಕ್ಯಾಮೆರಾ ಒಮ್ಮೆ ಚಾರ್ಜ್ ಮಾಡಿದರೆ 8K 30fps ರೆಕಾರ್ಡಿಂಗ್ನಲ್ಲಿ ಸುಮಾರು 100 ನಿಮಿಷಗಳ ಕಾಲ ನಿರಂತರ ಶೂಟ್ ಮಾಡಬಹುದು. ಇದಲ್ಲದೆ, ಇದರಲ್ಲಿದೆ 105GB ಇಂಟರ್ನಲ್ ಮೆಮೊರಿ ಮತ್ತು ಫಾಸ್ಟ್ ಚಾರ್ಜಿಂಗ್ಗೆ USB-C ಪೋರ್ಟ್. ಕೇವಲ 12 ನಿಮಿಷಗಳಲ್ಲಿ 50% ಚಾರ್ಜ್ ಆಗಬಹುದು. Osmo 360 ಕ್ಯಾಮೆರಾವನ್ನು ಯೂರೋಪ್ ಮತ್ತು ಕೆನಡಾದಲ್ಲಿ ಈಗಾಗಲೇ ಮಾರಾಟಕ್ಕೆ ಅನುವು ಮಾಡಲಾಗಿದೆ. ಅಮೆರಿಕದಲ್ಲಿ ಈ ಉತ್ಪನ್ನ ಇನ್ನೂ ಲಭ್ಯವಿಲ್ಲ. ಇದರ ಅಂದಾಜು ಬೆಲೆ ₹45,000 ರಿಂದ ₹55,000 ರವರೆಗೆ ಇರಬಹುದು. ಈ ಎಲ್ಲಾ ವೈಶಿಷ್ಟ್ಯಗಳಿಂದ Osmo 360 ಕ್ರಿಯೇಟಿವ್ ವಿಡಿಯೋ ಕ್ರಿಯೇಟರ್ಗಳು, ವ್ಲಾಗರ್ಗಳು ಹಾಗೂ ಟ್ರಾವೆಲರ್ಸ್ಗಾಗಿ ಅತ್ಯುತ್ತಮ ಆಯ್ಕೆ ಆಗಿದೆ.
1 ಕಾಮೆಂಟ್ಗಳು
Atyuttamma camera
ಪ್ರತ್ಯುತ್ತರಅಳಿಸಿ