ಸ್ಯಾಮ್‌ಸಂಗ್ ಗ್ಯಾಲಾಕ್ಸಿ Z ಫೋಲ್ಡ್ 7, ಫ್ಲಿಪ್ 7 ಮತ್ತು ಫ್ಲಿಪ್ 7 FE ಈಗ ಭಾರತದಲ್ಲಿ ಮಾರಾಟಕ್ಕೆ ಲಭ್ಯ: ಬೆಲೆಗಳು, ವೈಶಿಷ್ಟ್ಯಗಳು ಮತ್ತು ಲಾಂಚ್ ಆಫರ್‌ಗಳು ಪ್ರಕಟ

 

ಇದೀಗ ಟೇಕ್ನಾಲಜಿ ಪ್ರೇಮಿಗಳಿಗೆ ಖುಷಿಯ ಸುದ್ದಿ! ಸ್ಯಾಮ್‌ಸಂಗ್ ತನ್ನ ಹೊಸ ತಲೆಮಾರಿಗೆ ಸೇರಿದ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜುಲೈ 25ರಿಂದ ಪ್ರಾರಂಭವಾದ ಮಾರಾಟದೊಂದಿಗೆ Galaxy Z Fold 7 5G, Galaxy Z Flip 7 5G ಮತ್ತು Galaxy Z Flip 7 FE 5G ಎಂಬ ಮೂರು ಮಾದರಿಗಳು ಲಭ್ಯವಾಗಿವೆ. ಹೆಚ್ಛು ತೆಳುವಾದ ವಿನ್ಯಾಸ, ಶಕ್ತಿಶಾಲಿ ಸ್ಪೆಕ್ಸ್ ಮತ್ತು ಆಕರ್ಷಕ ಆಫರ್‌ಗಳ ಮೂಲಕ, ಈ ಫೋನ್ಗಳು ಫೋಲ್ಡಬಲ್ ಮಾರುಕಟ್ಟೆಯಲ್ಲಿ ಹೊಸ ಮಾನದಂಡ ಸ್ಥಾಪಿಸಲು ಸಜ್ಜಾಗಿವೆ.

Galaxy Z Fold 7 5G ಅನ್ನು ಸ್ಯಾಮ್‌ಸಂಗ್ ತನ್ನ ಫ್ಲ್ಯಾಗ್‌ಶಿಪ್ ಫೋಲ್ಡಬಲ್ ಫೋನ್ ಆಗಿ ಪರಿಚಯಿಸಿದೆ. ಇದು ಪುಸ್ತಕದ ವಿನ್ಯಾಸದಲ್ಲಿದ್ದು, ಹೆಚ್ಚು ಬಲಿಷ್ಠ ಮತ್ತು ಪ್ರೀಮಿಯಂ ಅನಿಸುವ ಶಕ್ತಿಶಾಲಿ ಫೋನ್. ಈ ಫೋನ್ ಬ್ಲೂ ಶ್ಯಾಡೋ, ಜೆಟ್ ಬ್ಲಾಕ್ ಮತ್ತು ಸಿಲ್ವರ್ ಶ್ಯಾಡೋ ಎಂಬ ಮೂರೂ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಇದರ ಬೆಲೆ ₹1,74,999 ರಿಂದ ಪ್ರಾರಂಭವಾಗಿದ್ದು 12GB RAM + 256GB ಶೇಖರಣಾ ಆಯ್ಕೆಗೆ ಇದೆ. 12GB RAM + 512GB ₹1,86,999ಕ್ಕೆ, ಮತ್ತು 16GB RAM + 1TB ₹2,16,999ಗೆ ಲಭ್ಯ.

ಇದರ ಜೊತೆಗೆ Galaxy Z Flip 7 5G ಕೂಡ ಲಾಂಚ್ ಆಗಿದ್ದು, ಇದು ಕಾಂಪ್ಯಾಕ್ಟ್ ಹಾಗೂ ಸ್ಟೈಲಿಶ್ ಕ್ಲ್ಯಾಮ್‌ಷೆಲ್ ವಿನ್ಯಾಸ ಹೊಂದಿದೆ. ಯುವ ಜನತೆಗೆ ಗಮಿಸಲಾರಂಥ ಈ ಮಾದರಿ ಬ್ಲೂ ಶ್ಯಾಡೋ, ಕೊರಲ್ ರೆಡ್, ಜೆಟ್ ಬ್ಲಾಕ್ ಮತ್ತು ಮಿಂಟ್ ಬಣ್ಣಗಳಲ್ಲಿ ಲಭ್ಯವಿದೆ. ಇದರ 12GB RAM + 256GB ಮಾದರಿಯು ₹1,09,999 ಹಾಗೂ 12GB RAM + 512GB ಮಾದರಿ ₹1,21,999ಗೆ ಲಭ್ಯ.

ಸೇರಿಕೊಂಡಿರುವ Galaxy Z Flip 7 FE 5G ಸ್ಯಾಮ್‌ಸಂಗ್‌ನ ಬಜೆಟ್ ಫ್ರೆಂಡ್ಲಿ ಫೋಲ್ಡಬಲ್ ಆಯ್ಕೆಯಾಗಿದೆ. ಮೊದಲ ಬಾರಿಗೆ ಫೋಲ್ಡಬಲ್ ಫೋನ್ ಅನುಭವಿಸಲು ಬಯಸುವವರಿಗಾಗಿ ಇದನ್ನು ರೂಪಿಸಲಾಗಿದೆ. ಬ್ಲಾಕ್ ಮತ್ತು ವೈಟ್ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್‌‍‌ನ 8GB RAM + 128GB ಮಾದರಿಯು ₹89,999 ಮತ್ತು 8GB RAM + 256GB ಮಾದರಿ ₹95,999 ಬೆಲೆಯಲ್ಲಿ ಲಭ್ಯ.

ಈ ಎಲ್ಲಾ ಹೊಸ ಮಾದರಿಗಳನ್ನು ಈಗ ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್, Flipkart, Amazon ಮತ್ತು ಪ್ರಮುಖ ರಿಟೇಲ್ ಶೋರೂಂಗಳಲ್ಲಿ ಖರೀದಿಸಬಹುದು. ಶೂನ್ಯ ಬಡ್ಡಿದರ EMI ಯೋಜನೆಗಳನ್ನು ಸ್ಯಾಮ್‌ಸಂಗ್ ಒದಗಿಸುತ್ತಿದ್ದು ₹6,777.72 monthly EMI ಯಿಂದ ಆರಂಭವಾಗುತ್ತದೆ. ಗ್ಯಾಲಾಕ್ಸಿ ಫೋಲ್ಡ್ 7 ಖರೀದಿಗೆ ₹3,500 ರಿವಾರ್ಡ್ ಪಾಯಿಂಟ್‌ಗಳು ಮತ್ತು ಫ್ಲಿಪ್ ಮಾದರಿಗಳಿಗೆ ₹2,200 ರಿವಾರ್ಡ್ ಪಾಯಿಂಟ್‌ಗಳು ಲಭ್ಯವಿವೆ. ಜೊತೆಗೆ, ಗ್ಯಾಲಾಕ್ಸಿ ವಾಚ್ 8 ಸರಣಿಯನ್ನು ಈ ಫೋನ್ಗಳೊಂದಿಗೆ ಖರೀದಿಸಿದರೆ ಹೆಚ್ಚುವರಿ ₹15,000 ರಿಯಾಯಿತಿಯೂ ಸಿಗುತ್ತದೆ.

ಸ್ಯಾಮ್‌ಸಂಗ್ ಈ ಬಾರಿ ಫೋಲ್ಡಬಲ್ ಟೆಕ್ನಾಲಜಿಯನ್ನು ಮತ್ತಷ್ಟು ನವೀನ ದಿಕ್ಕಿಗೆ ಒಯ್ಯಲು ಹೆಜ್ಜೆಹಾಕಿದೆ. ಹೆಚ್ಚು ತೆಳುವಾದ ಮತ್ತು ಹಗುರವಾದ ವಿನ್ಯಾಸ, ಶಕ್ತಿಶಾಲಿ ಪರ್ಫಾರ್ಮೆನ್ಸ್ ಮತ್ತು ಪೆರ್ಮಿಯಂ ಫೀನಿಷ್ ಇದಕ್ಕೆ ಹೆಚ್ಚುವರಿ ಗ್ಲಾಮರ್ ನೀಡುತ್ತಿದೆ. ನೀವು ಹೊಸ ಫೋನ್ ಹುಡುಕುತ್ತಿದ್ದರೆ, Galaxy Z Fold 7 ಅಥವಾ Flip 7 ಸರಣಿಗಳು ಖಂಡಿತವಾಗಿಯೂ ಪರಿಗಣನೆಗೆ ತಕ್ಕ ಆಯ್ಕೆಯಾಗಿದೆ.

ನೀವು ಯಾವ ಮಾದರಿಯನ್ನು ಆರಿಸುತ್ತೀರಿ? 

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು